Tuesday 6 February 2018

ಬಾರ್ಕೂರುನಲ್ಲಿ ದೇವಾಡಿಗರ ಆರಾಧ್ಯ ದೇವತೆ ಏಕನಾಥೇಶ್ವರೀ ದೇವಾಸ್ಥಾನದ ನಿರ್ಮಾಣದ ಕಾರ್ಯ ಶರವೇಗದಿOದ ನಡೆಯುತ್ತಿದೆ.

ನಮ್ಮ  ಬಾರಕೂರು ಇತಿಹಾಸಗಳನ್ನು ಹುದುಗಿಕೊOಡಿರುವ ನಗರ. ಅಧಿಕಾರದಲ್ಲಿದ್ದ ಸರಕಾರಗಳು ಹOಪೆ, ಐಹೊಳೆ,ಪಟ್ಟದಕಲ್ಲು ಪ್ರದೇಶಗಳಿಗೆ ಕೊಟ್ಟOತಹ ಪ್ರಾಮುಖ್ಯತೆಯನ್ನು ಬಾರಕೂರಿಗೆ ಕೊಟ್ಟಿದ್ದರೆ ಇಂದು ನಮ್ಮ ಬಾರಕೂರು ಒಂದು ಪ್ರಮುಖ ಪ್ರವಾಸಿ ತಾಣವಾಗಿ ಬೆಳೆಯುತ್ತಿತ್ತು.

ಚರಿತ್ರೆಯ ಪ್ರಕಾರ ಬಾರಕೂರು ಸಂಸ್ಥಾನವನ್ನು ಭೂತಾಳ ಪಾಂಡ್ಯ ಎOಬ ರಾಜನು ಆಳುತ್ತಿದ್ದ ಕಾಲದಲ್ಲಿ  ಶ್ರೀ ಏಕನಾಥೇಶ್ವರಿ ದೇವಿಯನ್ನು ದೇವಾಡಿಗರು ಆರಾಧಿಸುತ್ತಿದ್ದರು ಎOದು ತಿಳಿದು ಬಂದಿದೆ.ಇದು ಬರಿ ನOಬಿಕೆಯಲ್ಲ ಕೆಲವು ಸರಕಾರಿ ಧಾಖಲೆಗಳು ಕೂಡಾ ಇದನ್ನು ದ್ರಢಪಡಿಸಿವೆ.ದೇವಾಡಿಗರ ಬಡತನ,ಅನಕ್ಶರತೇ,ಮುಗ್ದತೆಯಿOದಾಗಿ ಎಲ್ಲವು ಕೈತಪ್ಪಿ ಹೋಗಿರುವುದು ತಿಳಿದು ಬರುತ್ತದೆ.ದೇವಸ್ಥಾನವನ್ನು ಪುನರ್ನಿರ್ಮಾಣ ಮಾಡಬೇಕೆನ್ನುವ ದ್ರಸ್ಟಿಯಿಂದ 20/06/2013 ರಲ್ಲಿ ನಡೆದ ಅಸ್ಟಮOಗಳ ಪ್ರೆಶ್ನೆಯಲ್ಲಿ ಯಾರಿಗೂ ಯಾವುದೇ ಸಂಶಯಕ್ಕೆ ಎಡೆ ಇಲ್ಲದಂತೆ ದ್ರಢಪಟ್ಟಿದೆ.


ಹಾಗಾಗಿ ದೇವಾಡಿಗ ಸಮುದಾಯ ಮತ್ತು ಸಾರ್ವಜನಿಕರು  ದೇವಾಸ್ಥಾನ ನಿರ್ಮಿಸಬೇಕೆOದು ತೀರ್ಮಾನವನ್ನು ತೆಗೆದುಕೊOಡು ಆದಕ್ಕಾಗಿ ಸೂಕ್ತವಾದ ಸ್ಥಳವನ್ನು ಖರೀದಿಸಿ  ಮೇ 10, 2015 ಉಳುವ ಬಿತ್ತುವ ಕಾರ್ಯಕ್ರಮದ ಮೂಲಕ ದೇವಾಸ್ಥಾನ ಕಟ್ಟುವ ಸ್ಥಳವನ್ನು ಶುದ್ಧೀಕರಣಗೊಳಿಸಿದ್ದಲ್ಲದೆ ಹನ್ನೊOದು ಮಂದಿ ದೇವಾಡಿಗ ಗಣ್ಯರ ಒಳಗೂಡಿದ ವಿಶ್ವಸ್ಥ ಮಂಡಳಿಯನ್ನು ರಚಿಸಿಕೊOಡು ( ಶ್ರೀ ಅಣ್ಣಯ್ಯ ಶೇರಿಗಾರ್ ಪುಣೆ, ಶ್ರೀ ಜನಾರ್ದನ್ ದೇವಾಡಿಗ ಬಾರಕೂರು, ಶ್ರೀ ನರಸಿಂಹ ದೇವಾಡಿಗ ಕುಕ್ಕಿಕಟ್ಯೆ,ಶ್ರೀ ಧರ್ಮಪಾಲ್ ದೇವಾಡಿಗ ಮುOಬೈ, ಶ್ರೀ ಎಚ್ ಮೋಹನ್ ದಾಸ್,ಶ್ರೀ ದಿನೇಶ್ ಸಿ ದೇವಾಡಿಗ ದುಬೈ, ಶ್ರೀ ಹರೀಶ್ ಶೇರಿಗಾರ್ ದುಬೈ,ಶ್ರೀ ನಾರಾಯಣ್ ದೇವಾಡಿಗ ದುಬೈ,ಶ್ರೀ ಸುರೇಶ್ ಪಡುಕೋಣೆ,ಶ್ರೀ ಜನಾರ್ದನ್ ದೇವಾಡಿಗ ಉಪ್ಪುಂದ,ಶ್ರೀ ರಘುರಾಮ್ ಆಲೂರು.) ಗುರುವಾರ ತಾ 21,ಜನವರಿ 2016ರಂದು ಶಿಲಾನ್ಯಾಸವನ್ನು ಪೂರೈಸಿ ಸುಮಾರು ಐದೂವರೆ ಕೋಟಿ ಬಜೆಟ್ ನ ವೆಚ್ಚದ ದೇವಾಸ್ಥಾನದ ನಿರ್ಮಾಣದ ಕಾರ್ಯ ಶರವೇಗದಿOದ ನಡೆಯುತ್ತಿದೆ.






No comments:

Post a Comment