Monday 4 June 2018

ಯಶಸ್ವಿಯಾಗಿ ಜರುಗಿದ ಏಕನಾಥೇಶ್ವರಿ ದೇವಾಲಯ ಬಾರಕೂರು ಮೊದಲ ಮ್ಯಾನೆಜಿಂಗ್ ಕಮಿಟೀ ಮೀಟಿಂಗ್.


ಭಾನುವಾರ 03-06-2018 ರಿಂದ 10.30 ರವರೆಗೆ ವೇಳಾಪಟ್ಟಿಯ ಪ್ರಕಾರ ಮೊದಲ ವ್ಯವಸ್ಥಾಪಕ ಸಮಿತಿಯ ಸಭೆ ನಡೆಯಿತು.

ದೇಶದ ವಿವಿಧ ಭಾಗಗಳನ್ನು ಪ್ರತಿನಿಧಿಸುವ 69 ಸದಸ್ಯರು ಸಕ್ರಿಯವಾಗಿ ಪಾಲ್ಗೊಂಡಿದ್ದರು. ಈ ಸಭೆಯಲ್ಲಿ 50 ಕ್ಕೂ ಹೆಚ್ಚು ಸಮುದಾಯ ಸಂಘಗಳು ಪ್ರತಿನಿಧಿಸಲ್ಪಟ್ಟಿವೆ

ಇದು ತುಂಬಾ ಆರೋಗ್ಯಕರ, ಶಿಸ್ತಿನ, ಸೂಚಿತ ಚರ್ಚೆಯಾಗಿತ್ತು, ಮತ್ತು ಪ್ರತಿಯೊಬ್ಬರಿಗೂ ಒಂದೇ ರೀತಿಯ ಗೌರವವನ್ನು ನಾವು ಪ್ರಶಂಸಿಸುತ್ತೇವೆ.

ನಾವು ಉತ್ತಮ ಸಂಪ್ರದಾಯವನ್ನು ಹೊಂದಿದ್ದೇವೆ. ಎಲ್ಲಾ ಪ್ರತಿನಿಧಿಗಳಿಗೆ ವಿಚಾರಣೆಗಳನ್ನು ಕಳುಹಿಸಲಾಗುವುದು.

ಮುಂದಿನ ಸಭೆಯು ಜುಲೈ 15 ರಂದು ಬೆಳಗ್ಗೆ 10.30 ಕ್ಕೆ ಪ್ರಸ್ತಾಪಿಸಲಾಗಿದೆ.

........:ದೇವಾಲಯದ ಸಮಿತಿಯ ವರದಿ.




Monday 26 February 2018

Bhramakalastova Events Video's of 19 -02-2018 to 23-02-2018





















ಶ್ರೀ ಏಕನಾಥೇಶ್ವರೀ ದೇವಿಯ ಚಿತ್ರವನ್ನು ರಚಿಸಿದ ಕಲಾವಿದ ದಿವಂಗತ ನರಸಿಂಹ ದೇವಾಡಿಗ.


ದಿವ್ಯಾತ್ಮಕ್ಕೊಂದು ಶಾಂತಿ ಕೊರೋಣ.:
ನಾವಿಂದು ಹೆಮ್ಮೆಯಿಂದ ಹೇಳಿಕೊಳ್ಳಲು ಭಕ್ತಿಯಿಂದ ಭಜಿಸಲು ನಮಗೋರ್ವ ಕುಲದೇವತೆ ಶ್ರೀ ಏಕನಾಥೇಶ್ವರಿ ಅಮ್ಮನವರಿದ್ದಾರೆ. ಆದರೆ ತಮ್ಮ ಅದ್ಭುತ ಕಲ್ಪನೆಯಿಂದ ಚಿತ್ರದ ಮೂಲಕ ದೇವಿಗೊಂದು ರೂಪವನ್ನು ಕೊಟ್ಟವರು ಇಂದು ನಮ್ಮೊಂದಿಗಿಲ್ಲ . ನಮ್ಮೆಲ್ಲರ ಮನೆ ಮನೆಗಳಲ್ಲಿ ರಾರಾಜಿಸುತ್ತಿರುವ ಶ್ರೀ ಏಕನಾಥೇಶ್ವರೀ ದೇವಿಯ ಚಿತ್ರವನ್ನು ರಚಿಸಿದ ಅದ್ಭುತ ಕಲಾವಿದ ದಿವಂಗತ ನರಸಿಂಹ ದೇವಾಡಿಗ ನೀಲಾವರ.


ನೀತಿಯಿಂದ ಸತ್ಯವಂತರಾಗಿ ಬಾಳುವುದೇ ಧರ್ಮ: ಡಾ| ವೀರೇಂದ್ರ ಹೆಗ್ಗಡೆ.


ಧರ್ಮ ಸಹಜ ಜೀವನದ ಭಾಗ. ನ್ಯಾಯ, ನೀತಿಯಿಂದ ಸತ್ಯವಂತರಾಗಿ ಬಾಳುವುದೇ ಧರ್ಮ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿ ಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು. ಅವರು ಬುಧವಾರ ಬಾರಕೂರು ಶ್ರೀ ಏಕನಾಥೇ ಶ್ವರೀ ದೇವಸ್ಥಾನದಲ್ಲಿ ಶ್ರೀ ದೇವಿಯ ಪ್ರತಿಷ್ಠಾಪನೆ ಮತ್ತು ಬ್ರಹ್ಮಕುಂಭಾಭಿಷೇಕದ ಪ್ರಯುಕ್ತ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನೈತಿಕ ಶಿಕ್ಷಣ ಅಧ್ಯಕ್ಷತೆ ವಹಿಸಿದ್ದ ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಲಿ ಮಾತನಾಡಿ, ಶ್ರದ್ಧೆ, ನಂಬಿಕೆ, ಸಂಸ್ಕಾರ ನಮ್ಮ ಜೀವನದಲ್ಲಿ ಅಳವಡಿಸಬೇಕು. ಜತೆಗೆ ಮಕ್ಕಳಿಗೆ ನೈತಿಕ ಶಿಕ್ಷಣ ನೀಡಬೇಕು ಎಂದರು. ಮೊಲಿ ಅವರು ದೇಗುಲಕ್ಕೆ ಸರಕಾರದಿಂದ 2 ಕೋಟಿ ರೂ. ಅನುದಾನ ನೀಡುವ ಭರವಸೆ ನೀಡಿದರು.
ಮಣಿಪಾಲ ಮಾಹೆ ವಿಶ್ವಸ್ತ ಟಿ. ಅಶೋಕ್‌ ಪೈ, ಮಾಲತಿ ವಿ. ಮೊಲಿ ಬೆಂಗಳೂರು, ಶಾಸಕರಾದ ಗೋಪಾಲ ಪೂಜಾರಿ, ವಿನಯ ಕುಮಾರ್‌ ಸೊರಕೆ, ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಸಂಸ್ಥಾಪಕ ತೋನ್ಸೆ ಜಯಕೃಷ್ಣ ಎ. ಶೆಟ್ಟಿ, ಅದಾನಿ ಸಮೂಹ ಸಂಸ್ಥೆ ಜತೆ ಆಡಳಿತ ನಿರ್ದೇಶಕ ಕಿಶೋರ್‌ ಆಳ್ವ, ಉದ್ಯಮಿ ಅನಿಲ್‌ ಜೈನ್‌, ದೇವಸ್ಥಾನ ನಿರ್ಮಾಣ ಸಮಿತಿ ಗೌರ ವಾಧ್ಯಕ್ಷ ಧರ್ಮಪಾಲ ಯು. ದೇವಾಡಿಗ, ದೇವಸ್ಥಾನ ಟ್ರಸ್ಟ್‌ನ ಅಧ್ಯಕ್ಷ ಬಿ. ಅಣ್ಣಯ್ಯ ಶೇರಿಗಾರ್‌, ಪ್ರಧಾನ ಕಾರ್ಯದರ್ಶಿ ನರಸಿಂಹ ಬಿ. ದೇವಾಡಿಗ, ಕೋಶಾಧಿಕಾರಿ ಬಿ. ಜನಾರ್ದನ ದೇವಾಡಿಗ, ಮುಖ್ಯ ಸಂಚಾಲಕ ಹಿರಿಯಡ್ಕ ಮೋಹನ್‌ದಾಸ್‌, ವಿಶ್ವಸ್ತರಾದ ಸುರೇಶ ಡಿ. ಪಡುಕೋಣೆ, ಹರೀಶ್‌ ಶೇರಿಗಾರ್‌, ನಾರಾಯಣ ಎಂ. ದೇವಾಡಿಗ, ದಿನೇಶ್‌ ಸಿ. ದೇವಾಡಿಗ, ಜನಾರ್ದನ ಎಸ್‌. ದೇವಾಡಿಗ ಎನ್‌. ರಘುರಾಮ ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು.
ಡಾ| ದೇವರಾಜ್‌ ಕೆ. ಸ್ವಾಗತಿಸಿ, ಮೋಹನದಾಸ್‌ ಹಿರಿಯಡ್ಕ ಸಮ್ಮಾನಿತರನ್ನು ಪರಿಚಯಿಸಿದರು. ವಿಜೇಶ್‌ ದೇವಾಡಿಗ, ನಾರಾಯಣ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು

Tuesday 13 February 2018

ಬಾರ್ಕುರ್ ಮಹಿಳೆಯರಿಂದ ಕರ ಸೇವೆ.


ಬಾರ್ಕುರ್ ಮಹಿಳೆಯರಿಂದ ಕರ ಸೇವೆ. ಊರಿನ ಸಮಸ್ತ ಮಹಿಳೆಯರು ಈ ಕರ ಸೇವೆಯಲ್ಲಿ ಪಾಲ್ಗೊಂಡು ಶ್ರೀ ಏಕನಾಥೇಶ್ವರಿ ದೇವಿಯ ಆಶೀರ್ವಾದ ಪಡೆದರು.. 

Tuesday 6 February 2018

ಬಾರ್ಕೂರುನಲ್ಲಿ ದೇವಾಡಿಗರ ಆರಾಧ್ಯ ದೇವತೆ ಏಕನಾಥೇಶ್ವರೀ ದೇವಾಸ್ಥಾನದ ನಿರ್ಮಾಣದ ಕಾರ್ಯ ಶರವೇಗದಿOದ ನಡೆಯುತ್ತಿದೆ.

ನಮ್ಮ  ಬಾರಕೂರು ಇತಿಹಾಸಗಳನ್ನು ಹುದುಗಿಕೊOಡಿರುವ ನಗರ. ಅಧಿಕಾರದಲ್ಲಿದ್ದ ಸರಕಾರಗಳು ಹOಪೆ, ಐಹೊಳೆ,ಪಟ್ಟದಕಲ್ಲು ಪ್ರದೇಶಗಳಿಗೆ ಕೊಟ್ಟOತಹ ಪ್ರಾಮುಖ್ಯತೆಯನ್ನು ಬಾರಕೂರಿಗೆ ಕೊಟ್ಟಿದ್ದರೆ ಇಂದು ನಮ್ಮ ಬಾರಕೂರು ಒಂದು ಪ್ರಮುಖ ಪ್ರವಾಸಿ ತಾಣವಾಗಿ ಬೆಳೆಯುತ್ತಿತ್ತು.

ಚರಿತ್ರೆಯ ಪ್ರಕಾರ ಬಾರಕೂರು ಸಂಸ್ಥಾನವನ್ನು ಭೂತಾಳ ಪಾಂಡ್ಯ ಎOಬ ರಾಜನು ಆಳುತ್ತಿದ್ದ ಕಾಲದಲ್ಲಿ  ಶ್ರೀ ಏಕನಾಥೇಶ್ವರಿ ದೇವಿಯನ್ನು ದೇವಾಡಿಗರು ಆರಾಧಿಸುತ್ತಿದ್ದರು ಎOದು ತಿಳಿದು ಬಂದಿದೆ.ಇದು ಬರಿ ನOಬಿಕೆಯಲ್ಲ ಕೆಲವು ಸರಕಾರಿ ಧಾಖಲೆಗಳು ಕೂಡಾ ಇದನ್ನು ದ್ರಢಪಡಿಸಿವೆ.ದೇವಾಡಿಗರ ಬಡತನ,ಅನಕ್ಶರತೇ,ಮುಗ್ದತೆಯಿOದಾಗಿ ಎಲ್ಲವು ಕೈತಪ್ಪಿ ಹೋಗಿರುವುದು ತಿಳಿದು ಬರುತ್ತದೆ.ದೇವಸ್ಥಾನವನ್ನು ಪುನರ್ನಿರ್ಮಾಣ ಮಾಡಬೇಕೆನ್ನುವ ದ್ರಸ್ಟಿಯಿಂದ 20/06/2013 ರಲ್ಲಿ ನಡೆದ ಅಸ್ಟಮOಗಳ ಪ್ರೆಶ್ನೆಯಲ್ಲಿ ಯಾರಿಗೂ ಯಾವುದೇ ಸಂಶಯಕ್ಕೆ ಎಡೆ ಇಲ್ಲದಂತೆ ದ್ರಢಪಟ್ಟಿದೆ.


ಹಾಗಾಗಿ ದೇವಾಡಿಗ ಸಮುದಾಯ ಮತ್ತು ಸಾರ್ವಜನಿಕರು  ದೇವಾಸ್ಥಾನ ನಿರ್ಮಿಸಬೇಕೆOದು ತೀರ್ಮಾನವನ್ನು ತೆಗೆದುಕೊOಡು ಆದಕ್ಕಾಗಿ ಸೂಕ್ತವಾದ ಸ್ಥಳವನ್ನು ಖರೀದಿಸಿ  ಮೇ 10, 2015 ಉಳುವ ಬಿತ್ತುವ ಕಾರ್ಯಕ್ರಮದ ಮೂಲಕ ದೇವಾಸ್ಥಾನ ಕಟ್ಟುವ ಸ್ಥಳವನ್ನು ಶುದ್ಧೀಕರಣಗೊಳಿಸಿದ್ದಲ್ಲದೆ ಹನ್ನೊOದು ಮಂದಿ ದೇವಾಡಿಗ ಗಣ್ಯರ ಒಳಗೂಡಿದ ವಿಶ್ವಸ್ಥ ಮಂಡಳಿಯನ್ನು ರಚಿಸಿಕೊOಡು ( ಶ್ರೀ ಅಣ್ಣಯ್ಯ ಶೇರಿಗಾರ್ ಪುಣೆ, ಶ್ರೀ ಜನಾರ್ದನ್ ದೇವಾಡಿಗ ಬಾರಕೂರು, ಶ್ರೀ ನರಸಿಂಹ ದೇವಾಡಿಗ ಕುಕ್ಕಿಕಟ್ಯೆ,ಶ್ರೀ ಧರ್ಮಪಾಲ್ ದೇವಾಡಿಗ ಮುOಬೈ, ಶ್ರೀ ಎಚ್ ಮೋಹನ್ ದಾಸ್,ಶ್ರೀ ದಿನೇಶ್ ಸಿ ದೇವಾಡಿಗ ದುಬೈ, ಶ್ರೀ ಹರೀಶ್ ಶೇರಿಗಾರ್ ದುಬೈ,ಶ್ರೀ ನಾರಾಯಣ್ ದೇವಾಡಿಗ ದುಬೈ,ಶ್ರೀ ಸುರೇಶ್ ಪಡುಕೋಣೆ,ಶ್ರೀ ಜನಾರ್ದನ್ ದೇವಾಡಿಗ ಉಪ್ಪುಂದ,ಶ್ರೀ ರಘುರಾಮ್ ಆಲೂರು.) ಗುರುವಾರ ತಾ 21,ಜನವರಿ 2016ರಂದು ಶಿಲಾನ್ಯಾಸವನ್ನು ಪೂರೈಸಿ ಸುಮಾರು ಐದೂವರೆ ಕೋಟಿ ಬಜೆಟ್ ನ ವೆಚ್ಚದ ದೇವಾಸ್ಥಾನದ ನಿರ್ಮಾಣದ ಕಾರ್ಯ ಶರವೇಗದಿOದ ನಡೆಯುತ್ತಿದೆ.






Tuesday 30 January 2018

Shree Ekanatheshwari Temple Construction Updates Photos.









ಬ್ರಹ್ಮಾವರ ದೇವಾಡಿಗ ಸಂಘದ ಸೂರಾಲು,ನೀಲಾವರ : ಸ್ವಯಂ ಸೇವಕರಿಂದ ಶ್ರಮದಾನ .

ಬಾರ್ಕೂರು  ಎಕನಾಥೇಶ್ವರಿ ದೇವಾಸ್ಥಾನದಲ್ಲಿ ಬ್ರಹ್ಮಾವರ ದೇವಾಡಿಗ ಸಂಘದ ಸೂರಾಲು,ನೀಲಾವರ,ಆರೂರು,ಹಂಗಾರ್ ಕಟ್ಟೆ,ಬ್ರಹಾವರ ದ ಸ್ವಯಂ ಸೇವಕರಿಂದ ಶ್ರಮದಾನ  ಸಂಘದ ಅಧ್ಯಕ್ಷರಾದ ಶಂಭು ಸೇರಿಗಾರ ಮುಂದಾಳತ್ವದಲ್ಲಿ ನಡೆಯುತ್ತಿದೆ.











ಉಡುಪಿ ದೇವಾಡಿಗರ್ ಸೇವಾ ಸಂಘ ದವರಿಂದ "ನಮ್ಮ ನಡೆ ಅಮ್ಮನಡೆಗೆ" ಕಾರ್ಯಕಮ.

ಉಡುಪಿ ದೇವಾಡಿಗರ್ ಸೇವಾ ಸಂಘ ದವರಿಂದ "ನಮ್ಮ ನಡೆ ಅಮ್ಮನಡೆಗೆ" ಕಾರ್ಯಕಮವನ್ನು ಶ್ರೀ ಗಣೇಶ್ ದೇವಾಡಿಗರಿಂದ ಪ್ರಯೋಜಿಷಿದರು. ಈ ಕಾರ್ಯಕ್ರಮದಲಿ ಅನೇಕ್ ದೇವಾಡಿಗ ಸಮಾಜ ಭಾಂದವರು ಪಾಲಗೊಂಡಿದ್ದರು.